Thursday, January 16, 2014

ಇತಿಹಾಸ ಮೂಲಾಧಾರಗಳು

ಸಮಾಜ ವಿಜ್ಞಾನ 8 ನೇ ತರಗತಿ
ಇತಿಹಾಸ ಪಾಠ1. ಮೂಲಾಧಾರಗಳು
ತಂತ್ರ: ಯೋಜನೆ
ಸಾಧನ:ತಪಶೀಲು ಪಟ್ಟಿ.
ವಲಯ: ಆಸಕ್ತಿ
ಜ್ಞಾನಾತ್ಮಕ & ತೊಡಗಿಸಿಕೊಳ್ಳುವಿಕೆ ಉದ್ದಿಷ್ಟಗಳು
1.ಮೂಲಾಧಾರಗಳು ಇತಿಹಾಸ ಅಧ್ಯಯನಕ್ಕೆ ಅವಶ್ಯಕ ಎನ್ನುವುದನ್ನು ತಿಳಿಯುವರು.
2.ಮೂಲಾಧಾರಗಳ ವಿವಿಧ ಪ್ರಕಾರಗಳನ್ನು ತಿಳಿದುಕೊಳ್ಳುವರು.
3.ಪ್ರಾಚ್ಯವಸ್ತುಗಳ ಮಹತ್ವವನ್ನು ಪಟ್ಟಿಮಾಡುವರು.
4.ಪ್ರಾಚೀನ ನಾಣ್ಯಗಳ ಉಪಯೋಗದ ಬಗ್ಗೆ ಅರಿತುಕೊಳ್ಳುವರು.
5.ತಮ್ಮ ಸಮೀಪದ ಐತಿಹಾಸಿಕ ಪ್ರದೇಶಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುವರು.
6.ಇತಿಹಾಸದ ಅಧ್ಯಯನದಲ್ಲಿ ಶಾಸನಗಳ ಅಗತ್ಯ ತಿಳಿಯುವರು.
7.ಪತ್ರಿಕೆಗಳಲ್ಲಿ ಬರುವ ಐತಿಹಾಸಿಕ ಪ್ರದೇಶಗಳ ಸಂಶೋಧನಾ ವಿವರಗಳನ್ನು ಸಂಗ್ರಹಿಸುವರು.
8.ತಮ್ಮ ಊರಿನ ದೇವಾಲಯಕ್ಕೆ ಭೇಟಿ ನೀಡಿ ಅದು ಯಾರ ಕಾಲಕ್ಕೆ ಸಂಬಂಧಿಸಿದೆ ಎನ್ನುವುದರ ಬಗ್ಗೆ ಮಾಹಿತಿ ಸಂಗ್ರಹಿಸುವರು..
ಚಟುವಟಿಕೆಗಳು.
1.ಹಳೆಯ ಕಾಲದ ನಾಣ್ಯಗಳನ್ನು ಸಂಗ್ರಹಿಸುವುದು & ಅವುಗಳ ಪ್ರದರ್ಶನ ಏರ್ಪಡಿಸುವುದು.
2.ವರ್ತಮಾನ ಪತ್ರಿಕೆಗಳಲ್ಲಿ ಬಂದಿರುವ ಹಳೆಯಕಾಲದ ದೇವಾಲಯಗಳು, ಶಾಸನಗಳ ಅಲ್ಬಮ್ ಸಿದ್ದಪಡಿಸುವುದು.
3.ಭಾರತಕ್ಕೆ ಪ್ರಾಚೀನ ಕಾಲದಲ್ಲಿ ಬಂದ ಯಾತ್ರಿಗಳ ಜೀವನ , ಚಿತ್ರ ಮಾಹಿತಿ ಸಂಗ್ರಹಿಸುವುದು.
4.ತಮ್ಮ ಸಮೀಪದ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡುವರು & ಚಿತ್ರಗಳನ್ನು , ಮಾಹಿತಿಗಳನ್ನು ಸಂಗ್ರಹಿಸುವುದು.
5.ಐತಿಹಾಸಿಕ ವಸ್ತುಗಳನ್ನು ಸಂಗ್ರಹಿಸಿ ಶಾಲೆಯಲ್ಲಿ ಐತಿಹಾಸಿಕ ಮಾದರಿಗಳ ವಸ್ತು ಪ್ರದರ್ಶನ ಏರ್ಪಡಿಸುವುದು./ಐತಿಹಾಸಿಕ ಮಾದರಿಗಳನ್ನು ಸಿದ್ಧಪಡಿಸಿ ಪ್ರದರ್ಶಿಸುವರು.

ಚಟುವಟಿಕೆ ತಪಶೀಲು ಪಟ್ಟಿ.
ಕ್ರ.ಸಂ.
ತಪಶೀಲು ಅಂಶಗಳು
ಹೌದು
ಇಲ್ಲ
1
ಯೋಜನೆಯ ಬಗ್ಗೆ ವಿದ್ಯಾರ್ಥಿಗೆ ಪರಿಕಲ್ಪನೆ ಇದೆಯೇ


2
ಯೊಜನೆಗೆ ಪೂರಕ ಮಾಹಿತಿ ಸಂಗ್ರಹಿಸಿದ್ದಾನೆಯೇ?


3
ಅವಶ್ಯ ಚಿತ್ರಗಳನ್ನು ಸಂಗ್ರಹಿಸಿದ್ದಾನೆಯೇ?


4.
ಶಾಸನಗಳ ಬಗ್ಗೆ ಅರಿತು ಕೊಂಡಿದ್ದಾನೆಯೇ


5.
ಜೊತೆ ವಿದ್ಯಾರ್ಥಿಗಳ ಸಹಕಾರ ಪಡೆದಿರುವನೇ?